ಬೈನಾಕ್ಯುಲರ್ಸ್ ಸಂಸ್ಥೆ ಲಾಂಛನದಲ್ಲಿ ನಿರ್ಮಾಣವಾಗಿರುವ ‘ನಾವಿಕ ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಡಳಿ ಯು\ಎ ಅರ್ಹತಾಪತ್ರವನ್ನು ನೀಡಿದೆ. ಚಿತ್ರ ಸದ್ಯದಲ್ಲೇ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಮನೀಷ್ಚಂದ್ರ ಹಾಗೂ ಶ್ರವಂತ್ರಾವ್ ನಾಯಕರಾಗಿ ಅಭಿನಯಿಸಿರುವ ಈ ಚಿತ್ರದ ತಾರಾಬಳಗದಲ್ಲಿ ಸ್ವಾತಿ, ಎಸ್ಟರ್ ಜನ್ನತ್, ಶೋಭ್ರಾಜ್, ಟೆನ್ನಿಸ್ಕೃಷ್ಣ, ನೀನಾಸಂಅಶ್ವತ್, ಸುದರ್ಶನ್, ಪದ್ಮಿನಿ ಪ್ರಕಾಶ್, ನಾಗರಾಜ ಕೋಟೆ, ಡಾರ್ಲಿಂಗ್ ವಿಶ್ವ, ಚಿದಾನಂದ್, ಆರಾಧ್ಯಾ, ಮಂಜುನಾಥ ಜಂಬೆ, ಚಿರಂಜೀವಿ ಮುಂತಾದವರಿದ್ದಾರೆ.
ಸೇನ್ಪ್ರಕಾಶ್ ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಸಿನಿಟೆಕ್ ಸೂರಿ ಅವರ ಛಾಯಾಗ್ರಹಣವಿದೆ. ಜಿ.ನರಸಿಂಹ ಕಾರ್ಯಕಾರಿ ನಿರ್ಮಾಪಕರಾಗಿರುವ ‘ನಾವಿಕನಿಗೆ ರಂಗಸ್ವಾಮಿ ಬಿಳುಗಲಿ ಕಥೆ ಬರೆದಿದ್ದಾರೆ. ರಾಜ್ನಾರಾಯಣ್ ಸಂಗೀತ ನಿರ್ದೇಶನ, ಆರ್.ಡಿ.ರವಿ ಸಂಕಲನ, ಬಾಬುಖಾನ್ ಕಲಾ ನಿರ್ದೇಶನ, ಯೋಗೀಶ್ ಸಂಭಾಷಣೆ, ಸುಬ್ಬು ಸಾಹಸ ನಿರ್ದೇಶನ ಹಾಗೂ ರಾಜು ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.